ರಾಯಚೂರು ಕೋಟೆ ಉತ್ತರ ಕರ್ನಾಟಕದ ರಾಯಚೂರು ನಗರದ ಹೃದಯಭಾಗದ ಬೆಟ್ಟದ ಮೇಲೆ ಇರುವ ಕೋಟೆಯೇ ಈ ರಾಯಚೂರು ಕೋಟೆ. ಈ ರಾಯಚೂರು ಪ್ರಾಂತ್ಯವನ್ನು (ರಾಯಚೂರು ದೋಅಬ್) ಕಾಕತೀಯ ರಾಜವಂಶಗಳು, ರಾಷ್ಟ್ರಕೂಟರು, ವಿಜಯನಗರ ಸಾಮ್ರಾಜ್ಯ, ಬಹಮನಿ ಸುಲ್ತಾನರು ಎಂಬ ಹಲವು ರಾಜಮನೆತನಗಳು ಆಳಿವೆ. == ಇತಿಹಾಸ == ಬಾದಾಮಿಯ ಚಾಲುಕ್ಯರ ಕಾಲದಿಂದಲೂ ಇಲ್ಲಿ ಕೋಟೆಯು ಅಸ್ತಿತ್ವದಲ್ಲಿದ್ದು ; ಕಲ್ಯಾಣಿ ಚಾಲುಕ್ಯರ ಆಳ್ವಿಕೆಯಲ್ಲಿ ಈ ಕೋಟೆಯನ್ನು ನವೀಕರಿಸಲಾಯಿತು. ಈಗಿರುವ ಕೋಟೆಯನ್ನು ಕ್ರಿ.ಶ. ೧೨೯೪ರಲ್ಲಿ ಕಾಕತೀಯರ ಆಳ್ವಿಕೆಯಲ್ಲಿ ನಿರ್ಮಾಣ ಮಾಡಲಾಯಿತು. ಇಲ್ಲಿರುವ ಒಂದು ಶಾಸನದ ಪ್ರಕಾರ ಈ ಕೋಟೆಯನ್ನು ರಾಣಿ ರುದ್ರಮ್ಮದೇವಿಯವರ ಮಂತ್ರಿಯಾದ ರಾಜ ಗೋರೆ ಗಂಗಯ್ಯ ರಡ್ಡಿವಾರುರವರ ಆದೇಶದಂತೆ ರಾಜ ವಿಠಲನು ನಿರ್ಮಿಸಿದನೆಂದು ಉಲ್ಲೇಖವಿದೆ. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಸಂದರ್ಭದಲ್ಲಿ, ತಮ್ಮದೊಂದು ವಿಜಯಾಚರಣೆಯ ಸಂಭ್ರಮದಲ್ಲಿ ಕೃಷ್ಣದೇವರಾಯನು ಈ ಕೋಟೆಯ ಉತ್ತರದ ಪ್ರವೇಶದ್ವಾರವನ್ನು ನಿರ್ಮಿಸಿದನು. ಈ ಕೋಟೆಯು ಅಲ್ಲಿರುವ ಹಲವು ಭಾಷೆಗಳ, ವಿವಿಧ ಬಗೆಯ ಶಾಸನಗಳಿಗೆ ಹೆಸರುವಾಸಿಯಾಗಿದೆ. ಒಮ್ಮೆ ಮಾರ್ಚ್ ೨೦೧೧ ರಲ್ಲಿ, ಎಂಜಿನಿಯರ್ ಗಳು ಈ ಕೋಟೆಯ ವಾಯುವ್ಯ ಭಾಗದ ಗೋಡೆಯನ್ನು ಸ್ವಚ್ಛಗೊಳಿಸುವಾಗ, ಅವರಿಗೆ ೧೩ನೇ ಶತಮಾನದ ೯೫ ಗ್ರಾನೈಟಿನ ಚೆಂಡುಗಳು ಹಾಗು ಒಂದು ಫಿರಂಗಿ ದೊರೆತಿವೆ. == ಉಲ್ಲೇಖಗಳು ==